Indian Air Force ಅಗ್ನಿವೀರ್ ವಾಯು 01/2027: ವಯೋಮಿತಿ 22 ವರ್ಷಕ್ಕೆ ವಿಸ್ತರಣೆ, ಮತ್ತೆ ಅರ್ಜಿ ಹಾಕೋ ಅವಕಾಶ

ಸ್ನೇಹಿತರೇ, ಮೊದಲಿಗೆ Indian Air Force ಅಗ್ನಿವೀರ್ ವಾಯು 01/2027 ಅರ್ಜಿ ಹಾಕಲು ಮಿಸ್ ಆಗಿದ್ದೀರಾ? ಅಥವಾ ವಯಸ್ಸು ಕಾರಣದಿಂದ ಅರ್ಹತೆ ಇಲ್ಲ ಅನ್ನಿಸಿತ್ತಾ? ಈಗ ನಿಮ್ಮಿಗಾಗಿ ದೊಡ್ಡ ಅಪ್‌ಡೇಟ್ ಬಂದಿದೆ.

ಅಗ್ನಿವೀರ್ ವಾಯು 01/2027 ನೇಮಕಾತಿಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯಿಂದ ಹೊಸ ತಿದ್ದುಪಡಿ ಪ್ರಕಟಿಸಲಾಗಿದೆ. ವಯೋಮಿತಿಯನ್ನು ಈಗ 22 ವರ್ಷವರೆಗೆ ವಿಸ್ತರಿಸಲಾಗಿದೆ.

ಈಗ ಯಾರು ಅರ್ಜಿ ಹಾಕಬಹುದು?

ಹಿಂದಿನ ಅಧಿಸೂಚನೆಯಲ್ಲಿ ವಯೋಮಿತಿ ಕಡಿಮೆ ಇತ್ತು. ಆದರೆ ಈಗ 01 ಜನವರಿ 2005 ರಿಂದ 01 ಜುಲೈ 2009ರೊಳಗೆ ಜನಿಸಿದ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಹಾಕಬಹುದು .

ಅಂದರೆ, 2005ರಲ್ಲಿ ಜನಿಸಿದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ.

ಮರು ನೋಂದಣಿ ದಿನಾಂಕಗಳು

ಹೊಸ ವಯೋಮಿತಿ ಘೋಷಣೆಯ ನಂತರ ಅರ್ಜಿ ಪ್ರಕ್ರಿಯೆ ಮತ್ತೆ ತೆರೆಯಲಾಗಿದೆ. 03 ಮಾರ್ಚ್ 2026 ರಿಂದ 10 ಮಾರ್ಚ್ 2026ರವರೆಗೆ ಆನ್‌ಲೈನ್ ನೋಂದಣಿ ಅವಕಾಶ ಇದೆ .ಈ ದಿನಾಂಕದ ನಂತರ ಮತ್ತೆ ಅವಕಾಶ ಸಿಗುತ್ತದೆಯಾ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಆದ್ದರಿಂದ ಕೊನೆಯ ದಿನ ಕಾಯಬೇಡಿ.

ಈ ನೇಮಕಾತಿ ಯಾವುದು?

ಇದು ಅಗ್ನಿಪಥ ಯೋಜನೆಯಡಿಯಲ್ಲಿ ನಡೆಯುವ ಅಗ್ನಿವೀರ್ ವಾಯು 01/2027 ಬ್ಯಾಚ್ ನೇಮಕಾತಿ. ನಾಲ್ಕು ವರ್ಷದ ಸೇವಾ ಅವಧಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ .

ಇದು ಕಮಿಷನ್ಡ್ ಆಫೀಸರ್ ಅಥವಾ ಪೈಲಟ್ ನೇಮಕಾತಿ ಅಲ್ಲ .

Indian Air Force agniveer vayu 01/2027 application reopen and age limit extended details

ಅರ್ಹತೆ – ಸರಳವಾಗಿ ಹೇಳೋದಾದರೆ

ವೈವಾಹಿಕ ಸ್ಥಿತಿ

ಅವಿವಾಹಿತ ಪುರುಷ ಮತ್ತು ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು. ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ಮದುವೆಯಾಗಲು ಅವಕಾಶ ಇರುವುದಿಲ್ಲ .

ವಿದ್ಯಾರ್ಹತೆ

ಸೈನ್ಸ್ ವಿಭಾಗದಲ್ಲಿ 10+2 ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ 50% ಅಂಕ ಅಗತ್ಯ.
ಇತರೆ ವಿಭಾಗದಲ್ಲಿ ಯಾವುದೇ ವಿಷಯದಲ್ಲಿ 10+2 ಪಾಸಾಗಿದ್ದು 50% ಒಟ್ಟು ಮತ್ತು 50% ಇಂಗ್ಲಿಷ್ ಅಂಕ ಬೇಕು .

ಪರೀಕ್ಷೆ ಯಾವಾಗ?

ಆನ್‌ಲೈನ್ ಪರೀಕ್ಷೆ 30 ಮತ್ತು 31 ಮಾರ್ಚ್ 2026ರಂದು ನಡೆಯಲಿದೆ . ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ನಿಯಮ ಇರುತ್ತದೆ .

ವೇತನ ಎಷ್ಟು ಸಿಗುತ್ತದೆ?

ಮೊದಲ ವರ್ಷ ₹30,000 ಮಾಸಿಕ ಪ್ಯಾಕೇಜ್.
ನಾಲ್ಕನೇ ವರ್ಷಕ್ಕೆ ಅದು ₹40,000 ಆಗುತ್ತದೆ.

ನಾಲ್ಕು ವರ್ಷಗಳ ನಂತರ ಸುಮಾರು ₹10.04 ಲಕ್ಷ ಸೇವಾ ನಿಧಿ ಪ್ಯಾಕೇಜ್ ಸಿಗುತ್ತದೆ . ಇದಲ್ಲದೆ ₹48 ಲಕ್ಷ ಜೀವ ವಿಮೆ ಕವರ್ ಕೂಡ ನೀಡಲಾಗುತ್ತದೆ . ಪಿಂಚಣಿ ಸೌಲಭ್ಯ ಇರುವುದಿಲ್ಲ ಎಂಬುದನ್ನೂ ಗಮನದಲ್ಲಿಡಿ .

ಅರ್ಜಿ ಹೇಗೆ ಹಾಕಬೇಕು?

ಅರ್ಜಿ ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

ಅಧಿಕೃತ ವೆಬ್‌ಸೈಟ್: https://iafrecruitment.edcil.co.in

ಅರ್ಜಿಶುಲ್ಕ ₹550 + 18% GST .

ಒಂದು ಮುಖ್ಯ ಸಲಹೆ

ವಯೋಮಿತಿ ವಿಸ್ತರಣೆ ಸಿಕ್ಕಿದೆ ಅಂದ್ರೆ ಇದು ಕೊನೆಯ ಅವಕಾಶ ಇರಬಹುದು. ನೀವು 2005 ಬ್ಯಾಚ್ ಆಗಿದ್ದರೆ, ಈ ಬಾರಿ ತಪ್ಪದೇ ಅರ್ಜಿ ಹಾಕಿ. ಎಲ್ಲಾ ನವೀಕರಣಗಳು ಮತ್ತು ಅಂತಿಮ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲೇ ಪ್ರಕಟವಾಗುತ್ತದೆ . ಅರ್ಹತೆ ಇದೆ ಅಂದ್ರೆ, ಈಗಲೇ ಅರ್ಜಿ ಹಾಕಿ.

Leave a Comment