ಕೇಂದ್ರ ಸರ್ಕಾರದ ಉದ್ಯೋಗಗಳಿಗೆ Central OBC ಸರ್ಟಿಫಿಕೆಟ್ ಕಡ್ಡಾಯವೇ? ಆಗಿದ್ದಲ್ಲಿ ಅದನ್ನು ಪಡೆಯುವುದು ಹೇಗೆ

ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಹಾಕೋ ಹೊತ್ತಿಗೆ ಓದು, ಸಿಲಬಸ್, ಪರೀಕ್ಷೆ ಅನ್ನೋದೇ ತಲೆಯಲ್ಲಿ ಇರುತ್ತೆ. ಆದರೆ ಫಾರ್ಮ್ ತುಂಬುವಾಗ ಒಂದು ಚಿಕ್ಕ ತಪ್ಪು ಮಾಡಿದ್ರೆ, ಎಷ್ಟೇ ಚೆನ್ನಾಗಿ ಪರೀಕ್ಷೆ ಬರೆದ್ರೂ ಕೊನೆಯ ಹಂತದಲ್ಲಿ ಅವಕಾಶ ಕೈ ತಪ್ಪಬಹುದು. ಅಂಥ ಒಂದು ಪ್ರಮುಖ ವಿಷಯವೇ OBC ಸರ್ಟಿಫಿಕೆಟ್.

ಬಹಳ ಜನ “ನಮ್ಮ ಬಳಿ ಜಾತಿ ಸರ್ಟಿಫಿಕೆಟ್ ಇದೆ, ಅಷ್ಟೇ ಸಾಕು” ಅಂತ ಭಾವಿಸ್ತಾರೆ. ಆದರೆ ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ವಿಷಯ ಅಷ್ಟು ಸರಳ ಅಲ್ಲ.

OBC ಕೋಟಾದಲ್ಲಿ ಅರ್ಜಿ ಹಾಕ್ತಿದ್ದರೆ ಸರ್ಟಿಫಿಕೆಟ್ ಬೇಕಾ?

ಇದ್ರಲ್ಲಿ ಎರಡು ಮಾತಿಲ್ಲ.
ಕೇಂದ್ರ ಸರ್ಕಾರದ ಉದ್ಯೋಗಗಳಿಗೆ OBC ಕೋಟಾದಲ್ಲಿ ಅರ್ಜಿ ಹಾಕ್ತಿದ್ದರೆ, ಸರಿಯಾದ ರೀತಿಯ OBC ಸರ್ಟಿಫಿಕೆಟ್ ಕಡ್ಡಾಯ.

ಇಲ್ಲಿ ಗಮನಿಸಬೇಕಾದ ಪಾಯಿಂಟ್ ಏನು ಅಂದ್ರೆ –
ರಾಜ್ಯ ಸರ್ಕಾರ ಕೊಟ್ಟ OBC ಸರ್ಟಿಫಿಕೆಟ್ (ಜಾತಿ ಪ್ರಮಾಣಪತ್ರ) ಎಲ್ಲ ಕಡೆಗೂ ಕೆಲಸ ಮಾಡಲ್ಲ. ಕೇಂದ್ರ ಉದ್ಯೋಗಗಳಿಗೆ ಬೇಕಾಗೋದು Central List OBC Certificate.

State OBC ಮತ್ತು Central OBC ಸರ್ಟಿಫಿಕೆಟ್ ಒಂದೇ ಅಲ್ಲ

ಇಲ್ಲಿ ಬಹಳ ಜನ ಗೊಂದಲಕ್ಕೀಡಾಗೋದು.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಸಿಗೋ OBC ಸರ್ಟಿಫಿಕೆಟ್‌ಗಳು:

  • ರಾಜ್ಯ ಸರ್ಕಾರಿ ಉದ್ಯೋಗಗಳಿಗೆ
  • ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ

ಅವು State OBC Certificate.
ಆದ್ರೆ SSC, UPSC, Banking, Railways, PSU ಗಳಂಥ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಇದ್ರನ್ನ ನೇರವಾಗಿ ಬಳಸಲು ಆಗೋದಿಲ್ಲ

Central OBC Certificateನಲ್ಲಿ ಏನು ಇರಬೇಕು?

ಸರ್ಟಿಫಿಕೆಟ್ ಇದ್ದರೆ ಸಾಕು ಅನ್ನೋದು ತಪ್ಪು. ಅದರೊಳಗಿನ ವಿವರಗಳು ಸರಿಯಾಗಿರಬೇಕು.

ಕೇಂದ್ರ ಉದ್ಯೋಗಗಳಿಗೆ ಮಾನ್ಯವಾಗಿರಬೇಕಂದ್ರೆ:

  • ನಿಮ್ಮ ಜಾತಿ Central OBC Listನಲ್ಲಿ ಇರಬೇಕು
  • ಸರ್ಟಿಫಿಕೆಟ್‌ನಲ್ಲಿ “For appointments under Government of India” ಅನ್ನೋ ಸಾಲು ಇರಬೇಕು
  • ನೀವು Non-Creamy Layerಗೆ ಸೇರಿದವರು ಅಂತ ಸ್ಪಷ್ಟವಾಗಿ ನಮೂದಿಸಿರಬೇಕು

ಇವುಗಳಲ್ಲಿ ಯಾವುದಾದ್ರೂ ಮಿಸ್ ಆದ್ರೆ, ಆ ಸರ್ಟಿಫಿಕೆಟ್ ಪ್ರಯೋಜನಕ್ಕೆ ಬರಲ್ಲ.

is central OBC is mandatory for central government jobs

ಕರ್ನಾಟಕದಲ್ಲಿ Central OBC Certificate ಪಡೆಯೋದು ಹೇಗೆ?

ಈಗ ಎಲ್ಲವೂ ಕಚೇರಿಗೆ ಅಲೆದಾಡೋ ಕಾಲ ಅಲ್ಲ.
ಕರ್ನಾಟಕದಲ್ಲಿ Central OBC Certificate ಪಡೆಯೋ ಪ್ರಕ್ರಿಯೆ Seva Sindhu ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ ನಡೆಯುತ್ತೆ.

ಸಾಮಾನ್ಯವಾಗಿ ಆಗೋ ಹಂತಗಳು:

  • ಮೊದಲು Seva Sindhu ಪೋರ್ಟಲ್‌ಗೆ ಲಾಗಿನ್ ಆಗಿ
  • ನಂತರ OBC / Caste Certificate ಸೇವೆ ಆಯ್ಕೆ ಮಾಡಿ
  • ಅಲ್ಲಿ Central Government purpose ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ
  • ಕೇಳಿರುವ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಎಲ್ಲಾ ವಿವರಗಳನ್ನು ಚೆಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
  • ನಂತರ ಸ್ಥಳೀಯ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತದೆ
  • ಪರಿಶೀಲನೆ ಮುಗಿದ್ಮೇಲೆ Central OBC Certificate ಮಂಜೂರು ಆಗುತ್ತದೆ

ಪರಿಶೀಲನೆ ಮುಗಿದ್ಮೇಲೆ ಸರ್ಟಿಫಿಕೆಟ್ ಮಂಜೂರು ಆಗುತ್ತೆ.

ಯಾವ ದಾಖಲೆಗಳು ಕೈಯಲ್ಲಿ ಇರಬೇಕು?

ಅರ್ಜಿಯ ಮಧ್ಯೆ ಅಡ್ಡಿ ಬರಬಾರದೆಂದರೆ, ಈ ದಾಖಲೆಗಳು ರೆಡಿ ಇಟ್ಕೊಳ್ಳೋದು ಒಳ್ಳೇದು:

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ರಾಜ್ಯ ಮಟ್ಟದ ಜಾತಿ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ

ಕೆಲವೊಮ್ಮೆ ಪೋಷಕರ ಜಾತಿ ದಾಖಲೆ ಅಥವಾ ಹಳೆಯ ಸರ್ಟಿಫಿಕೆಟ್‌ಗಳನ್ನೂ ಕೇಳಬಹುದು. ಇದು ಪರಿಶೀಲನೆ ಮೇಲೆ ಅವಲಂಬಿತ.

Non-Creamy Layer ಅಂದ್ರೆ ಏನು ಅನ್ನೋದು ಇಲ್ಲಿ ಮುಖ್ಯ

OBC ವಿಷಯ ಬಂದಾಗ ಈ ಪದ ಕೇಳಿಸದೇ ಇರಲ್ಲ.

ಸರಳವಾಗಿ ಹೇಳ್ಬೇಕಂದ್ರೆ,
ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಪ್ರಕಾರ ವಾರ್ಷಿಕ ಕುಟುಂಬ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು Non-Creamy Layerಗೆ ಸೇರುತ್ತೀರಿ.

ಈ ಮಿತಿ SSC, UPSC, BANKING, RAILWAYS, PSU ಎಲ್ಲಾ ಕೇಂದ್ರ ನೇಮಕಾತಿಗಳಿಗೆ ಒಂದೇ.

₹8 ಲಕ್ಷ ಮೀರಿದ್ರೆ → Creamy Layer → OBC ಕೋಟ ಲಾಭ ಇಲ್ಲ.

Non-Creamy Layer ಸರ್ಟಿಫಿಕೆಟ್ ಯಾವಾಗ ತೆಗೆದುಕೊಳ್ಳಬೇಕು?

ಇಲ್ಲಿ ಬಹಳ ಜನ ಮಾಡುವ ತಪ್ಪು ಏನು ಅಂದ್ರೆ –
“ಪರೀಕ್ಷೆ ಪಾಸ್ ಆದ್ಮೇಲೆ ನೋಡೋಣ” ಅನ್ನೋದು.

ಆದ್ರೆ ರಿಯಾಲಿಟಿ ಏನಂದ್ರೆ:

  • ಅರ್ಜಿ ಹಾಕುವಾಗಲೇ ಸರ್ಟಿಫಿಕೆಟ್ ರೆಡಿ ಇದ್ದರೆ safest
  • Document Verification ಹಂತದಲ್ಲಿ ಹೊಸದಾಗಿ ತೆಗೆದುಕೊಂಡ ಸರ್ಟಿಫಿಕೆಟ್ ಕೆಲವೊಮ್ಮೆ ಒಪ್ಪಿಕೊಳ್ಳಲ್ಲ
  • Validity date ಮಿಸ್ ಆದ್ರೆ ಸಮಸ್ಯೆ

ಅದಕ್ಕೇ, ಕೇಂದ್ರ ಉದ್ಯೋಗ ಯೋಚನೆ ಇದ್ದರೆ ಮುಂಚಿತವಾಗಿಯೇ Central OBC + Non-Creamy Layer ಸರ್ಟಿಫಿಕೆಟ್ ತಗೋದು ಉತ್ತಮ.

ಕೊನೆಯದಾಗಿ ನಮ್ಮ ಒಂದು ಸ್ಪಷ್ಟ ಮಾತು

ಒಂದು ವಿಷಯವನ್ನು ಇಲ್ಲಿ ಲೈಟ್ ಆಗಿ ತೆಗೆದುಕೊಳ್ಳಬೇಡಿ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ಪರ್ಧೆ ಜಾಸ್ತಿ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಆಯ್ಕೆ ಪ್ರಕ್ರಿಯೆ ಅಂಕಗಳಲ್ಲೇ ಮುಗಿಯೋದಿಲ್ಲ. ಡಾಕ್ಯುಮೆಂಟ್ ಪರಿಶೀಲನೆ ಹಂತದಲ್ಲಿ ಸಣ್ಣ ತಪ್ಪಿದ್ದರೂ ಅವಕಾಶ ಕೈ ತಪ್ಪಬಹುದು.

OBC ಕೋಟಾದಲ್ಲಿ ಅರ್ಜಿ ಹಾಕ್ತಿದ್ದರೆ, ಅರ್ಜಿ ಸಲ್ಲಿಸುವ ಮೊದಲು ಈ ವಿಚಾರಗಳನ್ನು ಒಮ್ಮೆ ನಿಮ್ಮಿಂದಲೇ ಪರಿಶೀಲಿಸಿ:

  • ನಿಮ್ಮ ಬಳಿ Central List OBC Certificate ಇದೆಯಾ, ಅಥವಾ ಕೇವಲ ರಾಜ್ಯ ಮಟ್ಟದ ಸರ್ಟಿಫಿಕೆಟ್ ಇದೆಯಾ
  • ಸರ್ಟಿಫಿಕೆಟ್‌ನಲ್ಲಿ Non-Creamy Layer ಅಂತ ಸ್ಪಷ್ಟವಾಗಿ ಉಲ್ಲೇಖ ಇದೆಯಾ ಮತ್ತು ಅದು ಮಾನ್ಯ ಅವಧಿಯೊಳಗಿದೆಯಾ
  • ಸರ್ಟಿಫಿಕೆಟ್ Central Government purposeಗೆ ನೀಡಲಾಗಿದೆ ಅನ್ನೋದು ಫಾರ್ಮ್ಯಾಟ್‌ನಲ್ಲಿ ಕಾಣ್ತಿದೆಯಾ

ಈ ಮೂರು ಪಾಯಿಂಟ್‌ಗಳು ಸರಿಯಾಗಿದ್ದರೆ ಮಾತ್ರ OBC ಮೀಸಲಾತಿಯ ಲಾಭ ವಾಸ್ತವವಾಗಿ ಅನ್ವಯವಾಗುತ್ತೆ. ಇಲ್ಲ ಅಂದ್ರೆ, ಪರೀಕ್ಷೆ ಎಷ್ಟೇ ಚೆನ್ನಾಗಿ ಬರೆದ್ರೂ ಡಾಕ್ಯುಮೆಂಟ್ ಹಂತದಲ್ಲಿ ಸಮಸ್ಯೆ ಎದುರಾಗಬಹುದು

ಈ ಮಾಹಿತಿಗಳನ್ನು ಓದಿ

Leave a Comment