RRB ALP 2026 ನೇಮಕಾತಿ: 11,127 ಹುದ್ದೆಗಳ ಸೂಚನಾ ಪ್ರಕಟಣೆ ಬಿಡುಗಡೆಯಾಗಿದೆ

ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಮಾಡಬೇಕು ಎನ್ನುವುದು ಅನೇಕ ಯುವಕರ ಕನಸು. ಆ ಕನಸನ್ನು ಸಾಕಾರಗೊಳಿಸಲು ಇದೀಗ ಒಳ್ಳೆಯ ಅವಕಾಶ ದೊರೆತಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ವತಿಯಿಂದ Assistant Loco Pilot (ALP) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸೂಚನಾ ಪ್ರಕಟಣೆ ಹೊರಬಿದ್ದಿದ್ದು, ದೇಶದಾದ್ಯಂತ ಸಾವಿರಾರು ಹುದ್ದೆಗಳು ಭರ್ತಿಯಾಗಲಿವೆ.

ಇದು ಪೂರ್ಣ ಅಧಿಸೂಚನೆ ಅಲ್ಲ, ಆದರೆ ಮುಂದಿನ ನೇಮಕಾತಿಗೆ ತಯಾರಿ ಆರಂಭಿಸಲು ಅಭ್ಯರ್ಥಿಗಳಿಗೆ ಇದು ಪ್ರಮುಖ ಸೂಚನೆ ಆಗಿದೆ.

ಹುದ್ದೆಗಳ ವಿವರ ಮತ್ತು ಪ್ರಮುಖ ದಿನಾಂಕಗಳು

  • ಹುದ್ದೆಯ ಹೆಸರು: ಅಸಿಸ್ಟೆಂಟ್ ಲೋಕೋ ಪೈಲಟ್ (ALP)
  • ಒಟ್ಟು ಹುದ್ದೆಗಳು: 11,127
  • ಅರ್ಜಿ ಪ್ರಾರಂಭ ದಿನಾಂಕ: 15 ಮೇ 2026
  • ಕೊನೆಯ ದಿನಾಂಕ: 14 ಜೂನ್ 2026 (ರಾತ್ರಿ 11:59ರವರೆಗೆ)
  • ಅರ್ಜಿ ವಿಧಾನ: ಕೇವಲ ಆನ್‌ಲೈನ್ ಮೂಲಕ

ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸುವುದು ಬಹಳ ಮುಖ್ಯ. ಕೊನೆಯ ದಿನದವರೆಗೆ ಕಾಯುವುದು ತಪ್ಪಿಸಿ, ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ವಯೋಮಿತಿ ಮತ್ತು ವೇತನ

  • ವಯೋಮಿತಿ: 18 ರಿಂದ 30 ವರ್ಷ (01 ಜುಲೈ 2026ರ ಪ್ರಕಾರ)
  • ವೇತನ: ₹19,900 (7ನೇ ವೇತನ ಆಯೋಗದ ಲೆವೆಲ್-2)

ಇದಕ್ಕೆ ಜೊತೆಗೆ DA, HRA ಸೇರಿದಂತೆ ಇತರೆ ಸರ್ಕಾರಿ ಭತ್ಯೆಗಳೂ ಲಭ್ಯವಾಗುತ್ತವೆ. ರೈಲ್ವೆ ಉದ್ಯೋಗದಲ್ಲಿ ಭದ್ರತೆ ಮತ್ತು ಸ್ಥಿರ ಆದಾಯ ಇರುವುದರಿಂದ ಇದು ಉತ್ತಮ ಆಯ್ಕೆಯಾಗಿದೆ.

ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಮುಖ್ಯ ವಿಷಯಗಳು

ಈ ಬಾರಿ ರೈಲ್ವೆ ಇಲಾಖೆಯು ದಾಖಲೆ ಪರಿಶೀಲನೆಯಲ್ಲಿ ಹೆಚ್ಚು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವ ಸೂಚನೆ ನೀಡಿದೆ. ಆದ್ದರಿಂದ ಅಭ್ಯರ್ಥಿಗಳು ಕೆಳಗಿನ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು:

  • ಅರ್ಜಿ ಸಲ್ಲಿಸುವಾಗ ಆಧಾರ್ ದೃಢೀಕರಣ ಕಡ್ಡಾಯ
  • ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕವು SSLC ಅಂಕಪಟ್ಟಿಯೊಂದಿಗೆ ಹೊಂದಿಕೆಯಾಗಬೇಕು
  • ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್ಸ್ ಅಪ್‌ಡೇಟ್ ಆಗಿರಬೇಕು

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ನಂತರದ ಹಂತಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಮುಂದೆ ಏನು?

ಈಗ ಬಿಡುಗಡೆಯಾಗಿರುವುದು ಕೇವಲ ಸೂಚನಾ ಪ್ರಕಟಣೆ (Indicative Notice) ಮಾತ್ರ.
ಶೈಕ್ಷಣಿಕ ಅರ್ಹತೆ, ಪರೀಕ್ಷಾ ವಿಧಾನ, ಸಿಲೆಬಸ್, ಮೀಸಲಾತಿ ಇತ್ಯಾದಿ ಸಂಪೂರ್ಣ ಮಾಹಿತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.

ಅಧಿಕೃತ ಅರ್ಜಿ ಸಲ್ಲಿಕೆ: www.rrbapply.gov.in

RRB ALP Recruitment 2026 Indicative Notice

ನಮ್ಮ ಮಾತು

ನಮ್ಮ ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದು ನಮ್ಮ ಪ್ರಮುಖ ಉದ್ದೇಶ. ಯಾವುದೇ ತಪ್ಪು ಮಾಹಿತಿಯನ್ನು ಹರಡುವುದಿಲ್ಲ ಮತ್ತು ಅಧಿಕೃತ ಮೂಲಗಳನ್ನೇ ಆಧರಿಸಿ ಈ ಮಾಹಿತಿಯನ್ನು ನೀಡಲಾಗಿದೆ.

ರೈಲ್ವೆ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರು ಈಗಲೇ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿ, ಇನ್ನೇನು ಕೆಲವೇ ದಿನಗಲ್ಲಿ ಅಧಿಕೃತ ಅಧಿಸೂಚನೆ ಹೊರ ಬೀಳುವುದರಿಂದ ಓದುವುದನ್ನು ಮುಂದುವರೆಸಿ.

ಈ ಮಾಹಿತಿಗಳನ್ನು ಓದಿ

Leave a Comment